7th Pay Commission Latest Updates: 7ನೇ ವೇತನ ಕುರಿತು ಬಿಗ್ ಅಪ್ಡೇಟ್ ನೀಡಿದ ಆಯೋಗ, ಯಾರಿಗೆ ಎಷ್ಟೆಷ್ಟು ಹೆಚ್ಚಾಗಲಿದೆ ಸಂಬಳ ?

7th Pay Commission Latest Updates: 7ನೇ ವೇತನ ಕುರಿತು ಬಿಗ್ ಅಪ್ಡೇಟ್ ನೀಡಿದ ಆಯೋಗ, ಯಾರಿಗೆ ಎಷ್ಟೆಷ್ಟು ಹೆಚ್ಚಾಗಲಿದೆ ಸಂಬಳ ? 7th Pay Commission: ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ರಾಜ್ಯ 7ನೇ ವೇತನ ಆಯೋಗಕ್ಕೆ(7th Pay Commission) ಸಲ್ಲಿಕೆ ಮಾಡಿರುವ ವರದಿಯಲ್ಲಿ ವಿವಿಧ ವೃಂದದ ವೇತನ ಹೆಚ್ಚಳದ ಕುರಿತು ಬೇಡಿಕೆ, ವಿವರಣೆಯನ್ನು ನೀಡಲಾಗಿದ್ದು, ಈ ಕುರಿತ ವಿವರ ಇಲ್ಲಿದೆ. ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ವರದಿಯಲ್ಲಿ 7ನೇ ವೇತನ ಆಯೋಗಕ್ಕೆ ಹಿರಿಯ ಸಹಾಯಕರು (Senior Assistant)/ ಹಿರಿಯ ಶೀಘ್ರಲಿಪಿಗಾರರು (Senior Steno)/ಶಾಖಾಧಿಕಾರಿ (Section Officer) ವೃಂದದ ಹುದ್ದೆಗಳ ವೇತನದ ಕುರಿತ ಮಾಹಿತಿ ಇಲ್ಲಿದೆ ನೋಡಿ.ಕೇಂದ್ರ ಸಚಿವಾಲಯದಲ್ಲಿ ಹಾಗೂ ನೆರೆಯ ರಾಜ್ಯಗಳ ಸಚಿವಾಲಯದಲ್ಲಿ ಸದರಿ ಹುದ್ದೆಯ ಸಹಾಯಕ ಶಾಖಾಧಿಕಾರಿಯಾಗಿರುವ ಜೊತೆಗೆ ಗ್ರೂಪ್-ಬಿ ನಾನ್ ಗೆಜೆಟೆಡ್ ಹುದ್ದೆಯಾಗಿರುತ್ತದೆ. ಈ ತತ್ಸಂಬಂಧ ಹಿರಿಯ ಸಹಾಯಕ ಹುದ್ದೆಯ ವೇತನ ಶ್ರೇಣಿ ರೂ. 37,900-70,850 ರಿಂದ ರೂ. 10,900-78,200ಕ್ಕೆ ಹೆಚ್ಚಿಸಲು ಬೇಡಿಕೆ ಇಡಲಾಗಿದೆ. ಅತ್ಯಂತ ಜವಾಬ್ದಾರಿಯುತವಾದ ಹುದ್ದೆಗಳಲ್ಲಿ ಹಿರಿಯ ಶೀಘ್ರಲಿಪಿಗಾರರ ಹುದ್ದೆ ಕೂಡ ಒಂದಾಗಿದ್ದು, ಪ್ರಸ್ತುತ ಹಿರಿಯ ಸಹಾಯಕ ಹುದ್ದೆಯ ಸಮಾನಾಂತರ ಹುದ್ದೆಯಾಗಿರುತ್ತದೆ. ಪ್ರಸ್ತುತ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಂತಹ ರಾಜ್...