ಸರ್ಕಾರ ಶೀಘ್ರದಲ್ಲೇ ನೌಕರರಿಗೆ 8 ನೇ ವೇತನ ಆಯೋಗವನ್ನು ರಚಿಸಲಿದ್ದು, ಅದರ ಚರ್ಚೆಯು ತ್ವರಿತ ಗತಿಯಲ್ಲಿ ನಡೆಯುತ್ತಿದೆ.
- 8ನೇ ವೇತನ ಆಯೋಗದ ಕುರಿತು ಮಹತ್ವದ ನಿರ್ಧಾರ
- ಮೂಲ ವೇತನದಲ್ಲಿ ಭಾರೀ ಏರಿಕೆಯಾಗಲಿದೆ.
- ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ ಸರ್ಕಾರ
ಬೆಂಗಳೂರು : 8ನೇ ವೇತನ ಆಯೋಗದ ಕುರಿತು ಸರ್ಕಾರ ಶೀಘ್ರದಲ್ಲೇ ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ. ಇದಾದ ಬಳಿಕ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಭಾರೀ ಏರಿಕೆಯಾಗಲಿದೆ. ಇದರಿಂದ ಹಲವಾರು ಲಕ್ಷ ಕೇಂದ್ರ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಸರ್ಕಾರ ಶೀಘ್ರದಲ್ಲೇ ನೌಕರರಿಗೆ 8 ನೇ ವೇತನ ಆಯೋಗವನ್ನು ರಚಿಸಲಿದ್ದು, ಅದರ ಚರ್ಚೆಯು ತ್ವರಿತ ಗತಿಯಲ್ಲಿ ನಡೆಯುತ್ತಿದೆ.
7 ನೇ ವೇತನ ಆಯೋಗವನ್ನು 2016 ರಲ್ಲಿ ಕೊನೆಯ ಬಾರಿಗೆ ಜಾರಿಗೆ ತರಲಾಯಿತು. 7ನೇ ವೇತನ ಆಯೋಗ ಜಾರಿಯಾದ ಬಳಿಕ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗಿದೆ. 8ನೇ ವೇತನ ಆಯೋಗದ ಕುರಿತು ಸರ್ಕಾರ ಇನ್ನೂ ಯಾವುದೇ ಅಧಿಕೃತ ನಿರ್ಧಾರ ಹೊರ ಬಿದ್ದಿಲ್ಲ. ಆದರೆ, ಶೀಘ್ರದಲ್ಲೇ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುತ್ತಿದೆ ವರದಿಗಳು
8ನೇ ವೇತನ ಆಯೋಗವನ್ನು ಯಾವಾಗ ರಚಿಸಲಾಗುವುದು :
Post Name | No of Post |
---|---|
karnataka | 23 |
Mandya | 876 |
Hassan | 645 |
Shivamanga | 132 |
Mysore | 34 |
Kodagu | 654 |
2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೂ ಮುನ್ನವೇ ಸರ್ಕಾರ ಈ ಮಹತ್ವದ ಘೋಷಣೆ ಮಾಡಲಿದೆ. ಇದೀಗ 8ನೇ ವೇತನ ಆಯೋಗ ರಚನೆಯಾದರೆ 2026ರ ವೇಳೆಗೆ ಜಾರಿಗೆ ಬರಬಹುದು. ಹೀಗಾದಾಗ ಕನಿಷ್ಠ ಮೂಲ ವೇತನದಲ್ಲಿ ದಾಖಲೆಯ ಏರಿಕೆ ಕಾಣಲಿದೆ.
ಈ ಹಿಂದೆ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಡಿಎಯನ್ನು ಸರ್ಕಾರ ಶೇ 4ರಷ್ಟು ಹೆಚ್ಚಿಸಿತ್ತು. ಇದಾದ ನಂತರ ನೌಕರರು ಪಡೆಯುತ್ತಿರುವ ಡಿಎ ಶೇ.46ಕ್ಕೆ ಏರಿಕೆಯಾಗಿದೆ. ಈ ಡಿಎ ಏರಿಕೆ ಬಳಿಕವೂ ಸರ್ಕಾರಿ ಉದ್ಯೋಗಿಗಳ ವೇತನ ಹೆಚ್ಚಳವಾಗಿದೆ.
ಫಿಟ್ಮೆಂಟ್ ಫ್ಯಾಕ್ಟರ್ ನಲ್ಲಿ ಹೆಚ್ಚಳ :
ಕೇಂದ್ರೀಯ ಉದ್ಯೋಗಿಗಳಿಗೆ ಫಿಟ್‌ಮೆಂಟ್ ಫ್ಯಾಕ್ಟರ್ ಅನ್ನು ಸರ್ಕಾರವು ಗಮನಾರ್ಹವಾಗಿ ಹೆಚ್ಚಿಸಬಹುದು. ಸರ್ಕಾರ ಫಿಟ್‌ಮೆಂಟ್ ಅಂಶವನ್ನು 2.60 ರಿಂದ 3.0 ಪಟ್ಟು ಹೆಚ್ಚಿಸಬಹು ಎನ್ನಲಾಗಿದೆ. ಇದಾದ ನಂತರ ಮೂಲ ವೇತನದಲ್ಲಿ ಭಾರೀ ಹೆಚ್ಚಳ ಕಂಡು ಬರಲಿದೆ.
ಫಿಟ್‌ಮೆಂಟ್ ಫ್ಯಾಕ್ಟರ್ ಏರಿಸಬೇಕು ಎನ್ನುವ ಬೇಡಿಕೆಯನ್ನು ನೌಕರರು ಬಹಳ ದಿನಗಳಿಂದ ಇಡುತ್ತಿದ್ದರೂ, ಈ ಬಗ್ಗೆ ಸರ್ಕಾರ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಈಗ ಸರ್ಕಾರ ಈ ಬಗ್ಗೆ ಶೀಘ್ರವೇ ಅನುಮೋದನೆ ನೀಡಲಿದೆ ಎನ್ನಲಾಗಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ.
0 Response to ಹೊಸ ವೇತನ ಆಯೋಗ ರಚನೆ ಬಹುತೇಕ ಪಕ್ಕಾ ! ಮೂಲ ವೇತನದಲ್ಲಿ ಭಾರೀ ಹೆಚ್ಚಳ
Post a Comment