ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಒಟ್ಟಿಗೆ ಬರಲಿದೆ ₹4,000 ರೂಪಾಯಿ; ದಿನಾಂಕ ಫಿಕ್ಸ್!

ಯಾರಿಗೆಲ್ಲ 2000 ರೂ. ಇನ್ನೂ ಬಂದಿಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದೀರೋ ಅಂತವರು ಟೆನ್ಶನ್ ಆಗುವುದು ಬೇಡ, ನಿಮಗೆ ಆಗಸ್ಟ್ ಹಾಗೂ ಸಪ್ಟೆಂಬರ್ ಎರಡು ತಿಂಗಳ ನಾಲ್ಕು ಸಾವಿರ ರೂಪಾಯಿ ಒಟ್ಟಿಗೆ ಬರಬಹುದು. ಅರೆ ನಿಮಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ವಾ? ನಿಮ್ಮ ಅಕ್ಕಪಕ್ಕದ ಮನೆಯವರ ಖಾತೆಗೆಲ್ಲ 2000 ರೂ. ಜಮಾ ಆಯ್ತ? ಆದರೆ ನಿಮ್ಮ ಖಾತೆಗೆ ಮಾತ್ರ ಹಣ ಬಂದಿಲ್ಲ ಅಂತ ಬೇಸರ ಆಗ್ತಿದ್ಯಾ? ಚಿಂತೆನೇ ಬೇಡ. ನಿಮ್ಮ ಖಾತೆಯಲ್ಲಿ ಎಲ್ಲವೂ ಸರಿಯಾಗಿದ್ದು ನಿಮ್ಮ ಅರ್ಜಿ ಕೂಡ ಸ್ವೀಕಾರವಾಗಿದ್ರೆ ಎರಡಲ್ಲ ಒಟ್ಟಿಗೆ ನಾಲ್ಕು ಸಾವಿರ ರೂಪಾಯಿಗಳು ನಿಮ್ಮ ಖಾತೆಗೆ ಜಮಾ ಆಗುತ್ತೆ! ಸರ್ಕಾರದ ಹೊಸ ದಿನಾಂಕ ಬಿಡುಗಡೆ ಹೌದು 2,000ಗಳನ್ನು ಉಚಿತವಾಗಿ ನೀಡುವ ಗ್ರಹಲಕ್ಷ್ಮಿ ಯೋಜನೆ (Gruha Lakshmi Scheme) ರಾಜ್ಯದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದೆ. ಲಕ್ಷಾಂತರ ಜನರು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000ರೂ.ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ದುರದೃಷ್ಟವಶಾತ್ ಇನ್ನೂ ಸಾಕಷ್ಟು ಜನರಿಗೆ ಹಣ ಬರುವುದಕ್ಕೆ ಇದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಹೇಳಿರುವಂತೆ ಅರ್ಜಿ ಸಲ್ಲಿಸಿರುವವರ ಪೈಕಿ ಶೇಕಡ 45% ನಷ್ಟು ಮಹಿಳೆಯರಿಗೆ ಇನ್ನೂ ಹಣ ವರ್ಗಾವಣೆ ಆಗಿಲ್ಲ. ಇದಕ್ಕೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಸಮಸ್ಯೆ ಅಥವಾ ಆಧಾರ್ ಕಾರ್ಡ್ (Aadhaar Card) ಸೀಡಿಂಗ್ ಆಗದೆ ಇರುವ ಸಮಸ್ಯೆ ಕಾರಣವಾಗಿದ್ದರೆ ಸರ್ಕಾರದ ಸರ...