ಯಾರಿಗೆಲ್ಲ 2000 ರೂ. ಇನ್ನೂ ಬಂದಿಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದೀರೋ ಅಂತವರು ಟೆನ್ಶನ್ ಆಗುವುದು ಬೇಡ, ನಿಮಗೆ ಆಗಸ್ಟ್ ಹಾಗೂ ಸಪ್ಟೆಂಬರ್ ಎರಡು ತಿಂಗಳ ನಾಲ್ಕು ಸಾವಿರ ರೂಪಾಯಿ ಒಟ್ಟಿಗೆ ಬರಬಹುದು.
ಅರೆ ನಿಮಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ವಾ? ನಿಮ್ಮ ಅಕ್ಕಪಕ್ಕದ ಮನೆಯವರ ಖಾತೆಗೆಲ್ಲ 2000 ರೂ. ಜಮಾ ಆಯ್ತ? ಆದರೆ ನಿಮ್ಮ ಖಾತೆಗೆ ಮಾತ್ರ ಹಣ ಬಂದಿಲ್ಲ ಅಂತ ಬೇಸರ ಆಗ್ತಿದ್ಯಾ? ಚಿಂತೆನೇ ಬೇಡ.
ನಿಮ್ಮ ಖಾತೆಯಲ್ಲಿ ಎಲ್ಲವೂ ಸರಿಯಾಗಿದ್ದು ನಿಮ್ಮ ಅರ್ಜಿ ಕೂಡ ಸ್ವೀಕಾರವಾಗಿದ್ರೆ ಎರಡಲ್ಲ ಒಟ್ಟಿಗೆ ನಾಲ್ಕು ಸಾವಿರ ರೂಪಾಯಿಗಳು ನಿಮ್ಮ ಖಾತೆಗೆ ಜಮಾ ಆಗುತ್ತೆ!
ಸರ್ಕಾರದ ಹೊಸ ದಿನಾಂಕ ಬಿಡುಗಡೆ
ಹೌದು 2,000ಗಳನ್ನು ಉಚಿತವಾಗಿ ನೀಡುವ ಗ್ರಹಲಕ್ಷ್ಮಿ ಯೋಜನೆ (Gruha Lakshmi Scheme) ರಾಜ್ಯದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದೆ. ಲಕ್ಷಾಂತರ ಜನರು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2000ರೂ.ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಆದರೆ ದುರದೃಷ್ಟವಶಾತ್ ಇನ್ನೂ ಸಾಕಷ್ಟು ಜನರಿಗೆ ಹಣ ಬರುವುದಕ್ಕೆ ಇದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಹೇಳಿರುವಂತೆ ಅರ್ಜಿ ಸಲ್ಲಿಸಿರುವವರ ಪೈಕಿ ಶೇಕಡ 45% ನಷ್ಟು ಮಹಿಳೆಯರಿಗೆ ಇನ್ನೂ ಹಣ ವರ್ಗಾವಣೆ ಆಗಿಲ್ಲ.
ಇದಕ್ಕೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಸಮಸ್ಯೆ ಅಥವಾ ಆಧಾರ್ ಕಾರ್ಡ್ (Aadhaar Card) ಸೀಡಿಂಗ್ ಆಗದೆ ಇರುವ ಸಮಸ್ಯೆ ಕಾರಣವಾಗಿದ್ದರೆ ಸರ್ಕಾರದ ಸರ್ವರ್ ಡೌನ್ ಆಗಿರುವುದು ಹಾಗೂ ಆರ್‌ಬಿಐ ಇಂದ ಹಂತ ಹಂತವಾಗಿ ಹಣ ಬಿಡುಗಡೆ ಆಗುತ್ತಿರುವುದು ಕೂಡ ಒಂದು ಕಾರಣ.
ಈಗಾಗಲೇ ಸಚಿವೆ ತಿಳಿಸಿರುವಂತೆ ಯಾರು ಚಿಂತೆ ಮಾಡುವ ಅಗತ್ಯವಿಲ್ಲ, ಫಲಾನುಭವಿಗಳ ಪ್ರತಿಯೊಬ್ಬರ ಖಾತೆಗೂ ಕೂಡ ಹಣ ಬಂದು ಸೇರುತ್ತದೆ ಸ್ವಲ್ಪ ವಿಳಂಬವಾದರೂ ನಿಮ್ಮ ಅರ್ಜಿ ಸ್ವೀಕಾರ ಗೊಂಡಿದ್ದರೆ ಖಂಡಿತವಾಗಿಯೂ ಹಣ ಬರುತ್ತದೆ (Money Deposit) ಎಂದು ಆಶ್ವಾಸನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
2,000 ಅಲ್ಲ 4,000 ಪಡೆಯಿರಿ
ಹೌದು, ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಲವರ ಖಾತೆಗೆ ಬರಲಿಲ್ಲ ಎನ್ನುವುದು ಸತ್ಯ. ಆದರೆ ಇದರ ಜೊತೆಗೆ ಸರ್ಕಾರ ಇನ್ನೊಂದು ಗುಡ್ ನ್ಯೂಸ್ (Good News) ನೀಡಿದ್ದು ಮೊದಲಿನ ಕಂತಿನ ಹಣ ಬಿಡುಗಡೆಯಾಗುವ ಪ್ರಕ್ರಿಯೆ ಮುಂದುವರೆಯುತ್ತಿದೆ ಅದರ ಜೊತೆಗೆ ಎರಡನೇ ಕಂತು (Second Instalment) ಬಿಡುಗಡೆಯ ಬಗ್ಗೆಯೂ ಕೂಡ ಸರ್ಕಾರ ದೊಡ್ಡ ಅಪ್ಡೇಟ್ (update) ನೀಡಿದೆ.
ಎರಡನೇ ಕಂತಿನ ಹಣ ಅಂದರೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳಿಗೆ ಕೊಡುವ ಪ್ರಕ್ರಿಯೆ ಮುಂದುವರೆದಿದೆ. ಜೊತೆಗೆ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಲಿದೆ. ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಸಪ್ಟೆಂಬರ್ 15 ರಿಂದ ಅಂದರೆ ಇನ್ನು ಕೇವಲ ಮೂರು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ (Bank Account) ಹಣ ಹಾಕುವ ಪ್ರಕ್ರಿಯೆ ಆರಂಭವಾಗುತ್ತದೆ.
ಯಾರಿಗೆಲ್ಲ 2000 ರೂ. ಇನ್ನೂ ಬಂದಿಲ್ಲ ಎಂದು ಬೇಸರಪಟ್ಟುಕೊಳ್ಳುತ್ತಿದ್ದೀರೋ ಅಂತವರು ಟೆನ್ಶನ್ ಆಗುವುದು ಬೇಡ, ನಿಮಗೆ ಆಗಸ್ಟ್ ಹಾಗೂ ಸಪ್ಟೆಂಬರ್ ಎರಡು ತಿಂಗಳ ನಾಲ್ಕು ಸಾವಿರ ರೂಪಾಯಿ ಒಟ್ಟಿಗೆ ಬರಬಹುದು.
ಸೆಪ್ಟೆಂಬರ್ 15ರಿಂದ ಎರಡನೇ ಕಂತಿನ ಹಣ ಹಾಕುವ ಪ್ರೊಸೆಸ್ ಕೂಡ ಆರಂಭವಾಗುತ್ತದೆ. ಇದು ಅಕ್ಟೋಬರ್ 15ರ ಒಳಗೆ ಎರಡನೇ ಕಂತಿನ ಹಣ ಕೂಡ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ.
ಅಗಸ್ಟ್ ತಿಂಗಳ ಹಣ ಸಪ್ಟೆಂಬರ್ ನಲ್ಲಿ ಹಾಗೂ ಸೆಪ್ಟೆಂಬರ್ ತಿಂಗಳ ಹಣ ಅಕ್ಟೋಬರ್ 15 ರ ಒಳಗೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೂ ಕೂಡ ನೇರ ವರ್ಗಾವಣೆ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಇನ್ನು ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಬಾಕಿ ಇದೆ, ಹಾಗಾಗಿ ಪ್ರತಿಯೊಬ್ಬರ ಮನೆಗೂ ಅಂಗನವಾಡಿ ಸಹಾಯಕರು ಅಥವಾ ಆಶಾ ಕಾರ್ಯಕರ್ತೆಯರನ್ನು ಕಳುಹಿಸಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿ ನೀಡುವುದು ಹಾಗೂ ಯಾರಿಗೆಲ್ಲಾ ಹಣ ಬಂದಿಲ್ಲವೋ ಅಂತವರ ಖಾತೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ತಕ್ಷಣವೇ ಪರಿಹರಿಸಿ ಅವರಿಗೂ ಕೂಡ ಹಣ ಸಿಗುವಂತೆ ಮಾಡುವುದು ಸರ್ಕಾರದ ಮುಂದಿರುವ ಗುರಿ.
ಇದರ ಜೊತೆಗೆ ಸಹಾಯವಾಣಿ (Helpline) ಹಾಗೂ ವಿಶೇಷ ಸೇವಾ ಕೇಂದ್ರಗಳನ್ನು ಕೂಡ ಸರ್ಕಾರ ತೆರೆಯಲು ಮುಂದಾಗಿದ್ದು ಈ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಯಾವುದೇ ದೂರನ್ನು ಕೂಡ ಗೃಹಿಣಿಯರು ದಾಖಲಿಸಬಹುದಾಗಿದೆ.
0 Response to ಗೃಹಲಕ್ಷ್ಮಿ ಹಣ ಯಾರಿಗೆ ಬಂದಿಲ್ವೋ ಅವರಿಗೆ ಒಟ್ಟಿಗೆ ಬರಲಿದೆ ₹4,000 ರೂಪಾಯಿ; ದಿನಾಂಕ ಫಿಕ್ಸ್!
Post a Comment