50 ಲಕ್ಷ ಸರ್ಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ! ವೇತನದಲ್ಲಿ 27,000 ರೂ.ಗಳ ಹೆಚ್ಚಳ



ಬೆಂಗಳೂರು:-

ದೇಶದಲ್ಲಿರುವ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಒಳ್ಳೆಯ ಸುದ್ದಿ ಇದೆ.  ತುಟ್ಟಿಭತ್ಯೆಯಲ್ಲಿನ ಹೆಚ್ಚಳವನ್ನು ಸರ್ಕಾರ ಶೀಘ್ರದಲಿಯೇ ಪ್ರಕಟಿಸಲಿದೆ. ಈ ಹೆಚ್ಚಳ ಶೇ.3 ಅಥವಾ 4ರಷ್ಟು ಆಗಿರಲಿದೆ. ಈ ಹೆಚ್ಚಳವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ. ಇದಕ್ಕಾಗಿ ಸರ್ಕಾರ ಸಕಲ ವ್ಯವಸ್ಥೆ ಮಾಡಿದೆ. ಹೆಚ್ಚಿಸಿದ ಡಿಎ ಯನ್ನು ಜುಲೈನಿಂದ ನೀಡಲಾಗುವುದು. 


ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಆದಷ್ಟು ಬೇಗ ಸರ್ಕಾರ ಈ ಬಗ್ಗೆ ಪ್ರಕಟಣೆ ಹೊರಡಿಸುವ ನಿರೀಕ್ಷೆ ಇದೆ. ನವರಾತ್ರಿಗೂ ಮುನ್ನ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ತುಟ್ಟಿಭತ್ಯೆಯಲ್ಲಿ 3 ಅಥವಾ 4 ಪ್ರತಿಶತ ಹೆಚ್ಚಳವಾದರೂ ಉದ್ಯೋಗಿಗಳ ವೇತನದಲ್ಲಿ ಗಮನಾರ್ಹ ಹೆಚ್ಚಳವಾಗುವುದು.


ತುಟ್ಟಿಭತ್ಯೆಯಲ್ಲಿ 3% ಹೆಚ್ಚಳ : 

ಮೂಲಗಳ ಪ್ರಕಾರ ತುಟ್ಟಿಭತ್ಯೆಯಲ್ಲಿನ ಹೆಚ್ಚಳವು ಮೂರು ಶೇಕಡಾಕ್ಕಿಂತ ಹೆಚ್ಚು ಇರಲಿದೆ ಎಂದು ಹೇಳಲಾಗುತ್ತದೆ. ದಶಮಾಂಶ ಬಿಂದುವನ್ನು ಮೀರಿ ಡಿಎ ಹೆಚ್ಚಿಸುವುದನ್ನು ಸರ್ಕಾರ ಪರಿಗಣಿಸುವುದಿಲ್ಲ. ಹೀಗಾಗಿ ಡಿಎ ಶೇ.3ರಷ್ಟು ಹೆಚ್ಚಳವಾಗಿ ಶೇ.45ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಪ್ರತಿ ವರ್ಷ ಉದ್ಯೋಗಿಗಳ DAಯನ್ನು ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧರಿಸಿ ಲೆಕ್ಕಹಾಕಲಾಗುತ್ತದೆ. ಜುಲೈ ತಿಂಗಳ ಸಿಪಿಐ ಅಂಕಿಅಂಶಗಳ ಪ್ರಕಾರ, ಸರ್ಕಾರವು ಡಿಎಯನ್ನು ಶೇಕಡಾ 3 ಕ್ಕಿಂತ ಹೆಚ್ಚು ಹೆಚ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅಧಿಕೃತ ಅಧಿಸೂಚನೆ ಇನ್ನೂ ಹೊರಬಿದ್ದಿಲ್ಲ.


ಹೇಗಿರಲಿದೆ ಲೆಕ್ಕಾಚಾರ ? : 

ಜನವರಿ ಲೆಕ್ಕಾಚಾರದಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ.42ಕ್ಕೆ ಹೆಚ್ಚಿಸಲಾಗಿತ್ತು. ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಲೆಕ್ಕ ಹಾಕಲಾಗುತ್ತದೆ. ಜನವರಿ ಮತ್ತು ಜುಲೈನಲ್ಲಿ  ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗುತ್ತದೆ. ಜನವರಿಯಲ್ಲಿ ಏರಿಕೆಯಾದ ನಂತರ, ಇಲ್ಲಿಯವರೆಗೆ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಯಾವುದೇ ಮಾಹಿತಿ ಇಲ್ಲ.


ಶೇ. 4 ರಷ್ಟು ತುಟ್ಟಿಭತ್ಯೆ ಹೆಚ್ಚಳ : 

ಜನವರಿಯಿಂದ ಜುಲೈವರೆಗೆ AICPI ಮಾಹಿತಿಯ ಪ್ರಕಾರ, ಹಣದುಬ್ಬರ ದರವು 4% ರಷ್ಟು ಹೆಚ್ಚಾಗುತ್ತದೆ ಎನ್ನುವುದು ಕೆಲವರ ವಾದ. ಹೀಗಾದಲ್ಲಿ   ಡಿಎ  42 ರಿಂದ 46 ಪ್ರತಿಶತಕ್ಕೆ ಏರುತ್ತದೆ. ಇದರಿಂದಾಗಿ ಕೇಂದ್ರ ನೌಕರರ ವಾರ್ಷಿಕ ವೇತನ 8,000ರೂಪಾಯಿಯಿಂದ 27,000ಕ್ಕೆ ಏರಿಕೆಯಾಗಲಿದೆ.


ಕನಿಷ್ಠ ಮೂಲ ವೇತನ ರೂ 18,000 ಮೇಲೆ ಡಿಎ ಹೆಚ್ಚಳ  ಎಷ್ಟಿರಲಿದೆ ? : 

  • ನೌಕರರ ಮೂಲ ವೇತನ - ತಿಂಗಳಿಗೆ 18,000 ರೂ
  • ಹೊಸ  ತುಟ್ಟಿಭತ್ಯೆ  (46%) - ತಿಂಗಳಿಗೆ ರೂ 8280
  • ಹಿಂದಿನ ತುಟ್ಟಿಭತ್ಯೆ (42%) - ರೂ. 7560
  • ಡಿಎ ಹೆಚ್ಚಳ - 8280-7560 = ರೂ. 720
  • ವಾರ್ಷಿಕ ವೇತನ ಹೆಚ್ಚಳ 720X12 = ರೂ.8640


56,900 ರೂ.ಗಳ ಗರಿಷ್ಠ ಮೂಲ ವೇತನದಲ್ಲಿ ಡಿಎ ಹೆಚ್ಚಳ ಎಷ್ಟಿರಲಿದೆ ? : 

  • ನೌಕರರ ಮೂಲ ವೇತನ = ತಿಂಗಳಿಗೆ 56,900 ರೂ
  • ಹೊಸ  ತುಟ್ಟಿಭತ್ಯೆ  (46%) = ತಿಂಗಳಿಗೆ ರೂ 26,174
  •  ಹಿಂದಿನ ತುಟ್ಟಿಭತ್ಯೆ (42%) = ರೂ. 23,898 
  • ಡಿಎ ಹೆಚ್ಚಳ - 26,174-23,898 = ರೂ. 2,276 ತಿಂಗಳಿಂದ
  • ವಾರ್ಷಿಕ  ವೇತನ  ಹೆಚ್ಚಳ = 2276X12= ರೂ. 27,312

Comments

Popular posts from this blog

7th Pay Commission Latest Updates: 7ನೇ ವೇತನ ಕುರಿತು ಬಿಗ್ ಅಪ್ಡೇಟ್ ನೀಡಿದ ಆಯೋಗ, ಯಾರಿಗೆ ಎಷ್ಟೆಷ್ಟು ಹೆಚ್ಚಾಗಲಿದೆ ಸಂಬಳ ?

ರಾಜ್ಯ ಸರ್ಕಾರಿ ನೌಕರರಿಗೆ ಶುಭಸುದ್ದಿ; ನವೆಂಬರ್ ನಲ್ಲಿ ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿ ಸಾಧ್ಯತೆ

ಹೊಸ ವೇತನ ಆಯೋಗ ರಚನೆ ಬಹುತೇಕ ಪಕ್ಕಾ ! ಮೂಲ ವೇತನದಲ್ಲಿ ಭಾರೀ ಹೆಚ್ಚಳ