-->

Responsive Ads

Responsive Ads



7th Pay Commission Latest Updates: 7ನೇ ವೇತನ ಕುರಿತು ಬಿಗ್ ಅಪ್ಡೇಟ್ ನೀಡಿದ ಆಯೋಗ, ಯಾರಿಗೆ ಎಷ್ಟೆಷ್ಟು ಹೆಚ್ಚಾಗಲಿದೆ ಸಂಬಳ ?



7th Pay Commission Latest Updates: 7ನೇ ವೇತನ ಕುರಿತು ಬಿಗ್ ಅಪ್ಡೇಟ್ ನೀಡಿದ ಆಯೋಗ, ಯಾರಿಗೆ ಎಷ್ಟೆಷ್ಟು ಹೆಚ್ಚಾಗಲಿದೆ ಸಂಬಳ ?

7th Pay Commission: ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ರಾಜ್ಯ 7ನೇ ವೇತನ ಆಯೋಗಕ್ಕೆ(7th Pay Commission) ಸಲ್ಲಿಕೆ ಮಾಡಿರುವ ವರದಿಯಲ್ಲಿ ವಿವಿಧ ವೃಂದದ ವೇತನ ಹೆಚ್ಚಳದ ಕುರಿತು ಬೇಡಿಕೆ, ವಿವರಣೆಯನ್ನು ನೀಡಲಾಗಿದ್ದು, ಈ ಕುರಿತ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ವರದಿಯಲ್ಲಿ 7ನೇ ವೇತನ ಆಯೋಗಕ್ಕೆ ಹಿರಿಯ ಸಹಾಯಕರು (Senior Assistant)/ ಹಿರಿಯ ಶೀಘ್ರಲಿಪಿಗಾರರು (Senior Steno)/ಶಾಖಾಧಿಕಾರಿ (Section Officer) ವೃಂದದ ಹುದ್ದೆಗಳ ವೇತನದ ಕುರಿತ ಮಾಹಿತಿ ಇಲ್ಲಿದೆ ನೋಡಿ.ಕೇಂದ್ರ ಸಚಿವಾಲಯದಲ್ಲಿ ಹಾಗೂ ನೆರೆಯ ರಾಜ್ಯಗಳ ಸಚಿವಾಲಯದಲ್ಲಿ ಸದರಿ ಹುದ್ದೆಯ ಸಹಾಯಕ ಶಾಖಾಧಿಕಾರಿಯಾಗಿರುವ ಜೊತೆಗೆ ಗ್ರೂಪ್-ಬಿ ನಾನ್ ಗೆಜೆಟೆಡ್ ಹುದ್ದೆಯಾಗಿರುತ್ತದೆ. ಈ ತತ್ಸಂಬಂಧ ಹಿರಿಯ ಸಹಾಯಕ ಹುದ್ದೆಯ ವೇತನ ಶ್ರೇಣಿ ರೂ. 37,900-70,850 ರಿಂದ ರೂ. 10,900-78,200ಕ್ಕೆ ಹೆಚ್ಚಿಸಲು ಬೇಡಿಕೆ ಇಡಲಾಗಿದೆ.

ಅತ್ಯಂತ ಜವಾಬ್ದಾರಿಯುತವಾದ ಹುದ್ದೆಗಳಲ್ಲಿ ಹಿರಿಯ ಶೀಘ್ರಲಿಪಿಗಾರರ ಹುದ್ದೆ ಕೂಡ ಒಂದಾಗಿದ್ದು, ಪ್ರಸ್ತುತ ಹಿರಿಯ ಸಹಾಯಕ ಹುದ್ದೆಯ ಸಮಾನಾಂತರ ಹುದ್ದೆಯಾಗಿರುತ್ತದೆ. ಪ್ರಸ್ತುತ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳಂತಹ ರಾಜ್ಯದ ಉನ್ನತ ಮಟ್ಟದ ಅಧಿಕಾರಿಗಳ ಆಪ್ತ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಇವರ ವೇತನ ಶ್ರೇಣಿಯನ್ನು 37,900-70,850 ಹೆಚ್ಚಿಸಲು ಬೇಡಿಕೆ ಇಡಲಾಗಿದೆ.

ಶಾಖಾಧಿಕಾರಿ ಹುದ್ದೆ ಸಚಿವಾಲಯದ ಶಾಖಾಧಿಕಾರಿ ಹುದ್ದೆಯು ಅತ್ಯಂತ ಪ್ರಮುಖವಾದ ಹುದ್ದೆಯಾಗಿದ್ದು, ಒಂದು ಶಾಖೆಯ ಸಮಸ್ತ ಉಸ್ತುವಾರಿಯನ್ನು ಹೊಂದಿರುತ್ತದೆ. ತಹಶೀಲ್ದಾರ್ ಹುದ್ದೆಯನ್ನು ಗ್ರೇಡ್-1 ಮತ್ತು ಗ್ರೇಡ್ -2 ತಹಶೀಲ್ದಾರ್ ಹುದ್ದೆಗಳನ್ನಾಗಿ ಬೇರ್ಪಡೆ ಮಾಡಿ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿ ಮಾಡಲಾಗಿದೆ. ಗ್ರೇಡ್ -1 ತಹಶೀಲ್ದಾರ್ ಹುದ್ದೆಯ ವೇತನ ಶ್ರೇಣಿಯನ್ನು ಸಚಿವಾಲಯದ ಶಾಖಾಧಿಕಾರಿ ಹುದ್ದೆಯ ವೇತನ ಶ್ರೇಣಿಗಿಂತ ಹೆಚ್ಚಿಸಲಾಗಿದೆ. ಇಲ್ಲಿಯವರೆಗೆ ತಹಶೀಲ್ದಾರ್ ಗ್ರೇಡ್-1 ಹುದ್ದೆಯ ವೇತನ ಶ್ರೇಣಿಯನ್ನು ಸಚಿವಾಲಯದ ಶಾಖಾಧಿಕಾರಿ ಹುದ್ದೆಗೆ ನೀಡಿಲ್ಲ. ಪ್ರಸಕ್ತ ವೇತನ ಸಮಿತಿಯು ಈ ತಾರತಮ್ಯವನ್ನು ಹೋಗಲಾಡಿಸಬೇಕೆಂಬುದು ಸಂಘದ ಮನವಿಯಾಗಿದೆ.

ಪ್ರಸ್ತುತ ಸಚಿವಾಲಯದ ಇಲಾಖೆಯ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಯವರಿಗೆ ಪೀಠಾಧಿಕಾರಿ (Desk Officer System) ವ್ಯವಸ್ಥೆಯನ್ನು ಜಾರಿಗೊಳಿಸಲು ನಿಯಮಗಳಲ್ಲಿ ಅನುವು ಮಾಡಿಕೊಡಲಾಗಿದೆ. ಸದರಿ ಹುದ್ದೆಗೆ ಅಧೀನ ಕಾರ್ಯದರ್ಶಿ ಅಥವಾ ಶಾಖಾಧಿಕಾರಿಗಳನ್ನು ನಿಯೋಜಿಸಬಹುದಾಗಿರುತ್ತದೆ. ಈ ತತ್ಸಬಂಧ ಪ್ರಸ್ತುತ ವೇತನ ಶ್ರೇಣಿಯನ್ನು ರೂ. 43,100-83,900 ರಿಂದ 52,650-97,100ಕ್ಕೆ ಹೆಚ್ಚಿಸುವ ಅನಿವಾರ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪೀಠಾಧಿಕಾರಿ ಹುದ್ದೆಯಲ್ಲಿ ಹೆಚ್ಚಿನ ಜವಾಬ್ದಾರಿ ನಿಭಾಯಿಸುವ ಹಿನ್ನೆಲೆ ಶಾಖಾಧಿಕಾರಿಗಳಿಗೆ ಇತರೆ ಇಲಾಖೆಗಳಲ್ಲಿ ಶಾಖಾಧಿಕಾರಿಗಳಾಗಿ ಕಾರ್ಯನಿರ್ವಹಿಸುವವರಿಗೆ ನೀಡುತ್ತಿರುವ ವೇತನ ಶ್ರೇಣಿಯನ್ನೇ ನಿಗದಿ ಮಾಡಿರುವುದು ಸರಿಯಲ್ಲ ಎಂದು ಹೇಳಲಾಗಿದೆ.

Related Posts with 7th Pay Commission Latest Updates: 7ನೇ ವೇತನ ಕುರಿತು ಬಿಗ್ ಅಪ್ಡೇಟ್ ನೀಡಿದ ಆಯೋಗ, ಯಾರಿಗೆ ಎಷ್ಟೆಷ್ಟು ಹೆಚ್ಚಾಗಲಿದೆ ಸಂಬಳ ?

1 Response to 7th Pay Commission Latest Updates: 7ನೇ ವೇತನ ಕುರಿತು ಬಿಗ್ ಅಪ್ಡೇಟ್ ನೀಡಿದ ಆಯೋಗ, ಯಾರಿಗೆ ಎಷ್ಟೆಷ್ಟು ಹೆಚ್ಚಾಗಲಿದೆ ಸಂಬಳ ?

  1. 37900-70850 ರಿಂದ 40900-78200 ಗೆ ಹೆಚ್ಚಿಸಲು ಬೇಡಿಕೆ ಇಡಲಾಗಿದೆ

    ReplyDelete

Advertise