ಬೆಂಗಳೂರು:
ಅಕ್ಟೋಬರ್ 19: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ವರದಿಯನ್ನು ಸಲ್ಲಿಕೆ ಮಾಡಿದೆ. ಈ ವರದಿಯಲ್ಲಿ ವಿವಿಧ ಭತ್ಯೆಗಳನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
7ನೇ ರಾಜ್ಯ ವೇತನ ಆಯೋಗ ನವೆಂಬರ್ ತಿಂಗಳಿನಲ್ಲಿ ಕರ್ನಾಟಕ ಸರ್ಕಾರಕ್ಕೆ ವರದಿ ನೀಡುವ ನಿರೀಕ್ಷೆ ಇದೆ. ಆಯೋಗ ಯಾವ ಭತ್ಯೆಯನ್ನು ಎಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಲಿದೆ? ಎಂದು ಸರ್ಕಾರಿ ನೌಕರರು ಕಾಯುತ್ತಿದ್ದಾರೆ. ಮನೆ ಬಾಡಿಗೆ ಸೇರಿ ಇತರ ಭತ್ಯೆಗಳ ಹೆಚ್ಚಳಕ್ಕೆ ಸಂಘ ಮುಂದಿಟ್ಟಿರುವ ಬೇಡಿಕೆಗಳ ವಿವರ ಇಲ್ಲಿದೆ.
ಪ್ರಯಾಣ ಭತ್ಯೆ ವಿವರ; ವರದಿಯಲ್ಲಿ ಬೆಂಗಳೂರು ನಗರವು ಸುಮಾರು 40 ಕಿ. ಮೀ. ವ್ಯಾಪ್ತಿಯಲ್ಲಿ ಹಬ್ಬಿದ್ದು, ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವೃಂದದ ಅಧಿಕಾರಿ/ ನೌಕರರು ದೂರದ ಪ್ರದೇಶಗಳಿಂದ ದಿನನಿತ್ಯ ಮೆಟ್ರೋ ಅಥವಾ ಇನ್ನಿತರ ಸಾರಿಗೆ ವ್ಯವಸ್ಥೆಯ ಮೂಲಕ ನಗರದ ಕೇಂದ್ರ ಸ್ಥಾನದಲ್ಲಿರುವ ಸಚಿವಾಲಯದ ಕಚೇರಿಗಳಿಗೆ ಪ್ರಯಾಣಿಸುತ್ತಾರೆ. ಆದುದ್ದರಿಂದ ಈಗಾಗಲೇ ಕೇಂದ್ರ ಸರ್ಕಾರವು ನೀಡಲಾಗುತ್ತಿರುವ ಮಾದರಿಯಲ್ಲಿ ಪ್ರಯಾಣ ಭತ್ಯೆಯನ್ನು ನೀಡಬೇಕು ಎಂದು ಬೇಡಿಕೆ ಇಟ್ಟಿದೆ.
ಉಪ ಕಾರ್ಯದರ್ಶಿ ಮೇಲ್ಪಟ್ಟ ವೃಂದದ ಅಧಿಕಾರಿಗಳಿಗೆ ಗೃಹ ಪರಿಚಾರಕ ಭತ್ಯೆಯನ್ನು ಕನಿಷ್ಠ ರೂ.11,000ಗಳಿಗೆ ನಿಗದಿಪಡಿಸುವುದು ಎಂದು ಮನವಿ ಮಾಡಲಾಗಿದೆ. ಗೃಹ ಪರಿಚಾರಕ ಭತ್ಯೆಯನ್ನು cs ಹುದ್ದೆಗೆ 20,000. acs ಹುದ್ದೆಗೆ 20,000. Pr.S ಹುದ್ದೆಗೆ 16,000. Sec ಹುದ್ದೆಗೆ 14,000. Spl. Sec/As/ JS/DS ಹುದ್ದೆಗೆ 12,000 ರೂ. ನಿಗದಿಪಡಿಸಬೇಕು ಎಂದು ಮನವಿ ಮಾಡಲಾಗಿದೆ.
ಕರ್ನಾಟಕ ಆರೋಗ್ಯ ಜ್ಯೋತಿ ಸಂಜೀವಿನಿ ಯೋಜನೆಯನ್ನು (Cash less Treatment) ನೌಕರರ ಹಿತದೃಷ್ಟಿಯಿಂದ ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.
ಅಲ್ಪೋಪಹಾರ ಭತ್ಯೆ (Sumputuary Allowance) ಉಪ ಕಾರ್ಯದರ್ಶಿ ವೃಂದಕ್ಕೆ ಪ್ರಸ್ತುತ ವಾರ್ಷಿಕ ರೂ. 10000 ಗಳಿದ್ದು, ಜಂಟಿ ಕಾರ್ಯದರ್ಶಿ ಮೇಲ್ಪಟ್ಟ ವೃಂದದ ಅಧಿಕಾರಿಗಳಿಗೆ ಪ್ರಸ್ತುತ ವಾರ್ಷಿಕ ರೂ. 12,500 ಗಳಿದ್ದು ಅದನ್ನು ಮಾಸಿಕ ರೂ. 3000 ಗಳಿಗೆ ನಿಗದಿಪಡಿಸುವಂತೆ ಕೋರಲಾಗಿದೆ.
ಪ್ರಸ್ತುತ ಸರ್ಕಾರವು ಎಲ್ಲಾ ಗ್ರೂಪ್ 'ಎ' ವೃಂದಕ್ಕೆ ರೂ. 40 ಲಕ್ಷಗಳು, ಗ್ರೂಪ್ 'ಬಿ' & ಕೆಳಮಟ್ಟದ ನೌಕರರಿಗೆ ಗರಿಷ್ಠ ರೂ. 25 ಲಕ್ಷಗಳ ಗೃಹ ನಿರ್ಮಾಣ ಮುಂಗಡವನ್ನು ಮಂಜೂರು ಮಾಡುತ್ತಿದೆ. ಸದರಿ ಮೊತ್ತವು ಈಗಿನ ಭೂಮಿಯ ಬೆಲೆ/ ನಿರ್ಮಾಣ ವೆಚ್ಚಕ್ಕೆ ಅನುಗುಣವಾಗಿರುವುದಿಲ್ಲ. ಗೃಹ ನಿರ್ಮಾಣ ಮುಂಗಡವನ್ನು ಹೆಚ್ಚಿಸುವುದರಿಂದ ಸರ್ಕಾರಕ್ಕೆ ಸರ್ಕಾರಿ ವಸತಿ ಗೃಹ (Government Quarters)ಗಳ ನಿರ್ವಹಣಾ ವೆಚ್ಚದಲ್ಲಿ ಉಳಿತಾಯವಾಗುತ್ತದೆ, ಸರ್ಕಾರವು ಪ್ರಸ್ತುತ Market Borrowings ಮೂಲಕ ಸುಮಾರು ಶೇ.8ರ ಬಡ್ಡಿ ದರದಲ್ಲಿ ಸಾಲವನ್ನು ಪಡೆಯುತ್ತಿದ್ದು, ಗೃಹ ನಿರ್ಮಾಣ ಮುಂಗಡದ ಬಡ್ಡಿ ದರವು ಶೇ.8.5 ಇರುವುದರಿಂದ ಹೆಚ್ಚಿಸಿದ ಗೃಹ ನಿರ್ಮಾಣ ಮುಂಗಡದಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯದ ಮೂಲವಾಗುತ್ತದೆ ಎಂದು ವಿವರಣೆ ನೀಡಿದೆ.
ಆದ್ದರಿಂದ ಪ್ರಸ್ತುತ ನಿಗದಿಪಡಿಸಿರುವ ಗೃಹ ನಿರ್ಮಾಣ ಮುಂಗಡವನ್ನು ಪರಿಷ್ಕರಿಸಿ ಅಖಿಲ ಭಾರತೀಯ ಸೇವೆಯ ಅಧಿಕಾರಿಗಳಿಗೆ ರೂ. 1 ಕೋಟಿ, ರಾಜ್ಯ ಆಡಳಿತ ಸೇವೆಗಳು ಮತ್ತು ರಾಜ್ಯದ ಎಲ್ಲಾ ಗ್ರೂಪ್ -ಎ ವೃಂದದ ಅಧಿಕಾರಿಗಳಿಗೆ ರೂ. 75 ಲಕ್ಷಗಳು ಮತ್ತು ಗ್ರೂಪ್ ಬಿ & ಸಿ ವೃಂದದ ನೌಕರರಿಗೆ ರೂ.50 ಲಕ್ಷಗಳವರೆಗೆ ಹೆಚ್ಚಿಸುವಂತೆ ಕೋರುತ್ತೇವೆ. ಇದರಿಂದ ಸರ್ಕಾರಕ್ಕೆ ಹಾಗೂ ಎಲ್ಲಾ ವರ್ಗದ ಸರ್ಕಾರಿನೌಕರರು/ ಅಧಿಕಾರಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂಬ ಅಂಶವನ್ನು ಪರಿಗಣಿಸಬಹುದಾಗಿದೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ವಾಹನ ತೆರಿಗೆ ವಿನಾಯಿತಿ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ವಾಹನ ತೆರಿಗೆ ವಿನಾಯಿತಿ ನೀಡಬೇಕು.
ಸಚಿವಾಲಯದ ಅಧಿಕಾರಿಗಳಿಗೆ ಈಗಾಗಲೇ ನೀಡಲಾಗುತ್ತಿರುವ ದೂರವಾಣಿ ವೆಚ್ಚ ಮರುಪಾವತಿಯನ್ನು ಗ್ರೂಪ್-ಸಿ ವೃಂದದ ನೌಕರರಿಗೂ ವಿಸ್ತರಿಸಬೇಕು.
ಸಿಆಸುಇ (ರಾಜ್ಯ ಶಿಷ್ಠಾಚಾರ) ಅಧಿಕಾರಿ/ ನೌಕರರಿಗೆ ನೀಡಲಾಗುತ್ತಿರುವ ವಿಶೇಷ ಭತ್ಯೆಗಳ ಮಾದರಿಯಲ್ಲಿಯೇ ಸಿಆಸುಇ (ಲೆಕ್ಕಪತ್ರ) ಹಾಗೂ ಕಾರ್ಯಕಾರಿ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ ನೌಕರರಿಗೂ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಕೇಂದ್ರ ಸರ್ಕಾರವು ನೌಕರರಿಗೆ Children's Education Allowance (ಮಕ್ಕಳ ಶಿಕ್ಷಣ ಭತ್ಯೆ) ತಿಂಗಳಿಗೆ ರೂ.2,250 + ಹಾಸ್ಟೆಲ್ ಸಬ್ಸಿಡಿ ರೂ. 6,750 (ಎರಡು ಮಕ್ಕಳಿಗೆ) ನೀಡುತ್ತಿರುವ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ನೀಡುವುದು. ಕೇಂದ್ರ ಸರ್ಕಾರದ ಮಾದರಿಯಲ್ಲಿ Leave Travel Concession (ರಜೆ ಪ್ರಯಾಣ ರಿಯಾಯಿತಿ) ಯನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು ಎಂದು ವರದಿಯಲ್ಲಿ ಕೋರಲಾಗಿದೆ.
Home Rent Allowance (ಮನೆ ಬಾಡಿಗೆ ಭತ್ಯೆ) ತುಟ್ಟಿ ಭತ್ಯೆ ಶೇ.50% ಮೀರಿದ ನಂತರ ಸ್ವಯಂ ಚಾಲಿತವಾಗಿ ನಗರ ಶ್ರೇಣಿಗನುಸಾರ ಶೇ.3%, ಶೇ.2% ಹಾಗೂ ಶೇ.1% ಕೇಂದ್ರ ಸರ್ಕಾರಿ ನೌಕರರಿಗೂ ಹೆಚ್ಚಳವಾಗುವಂತೆ ಹಾಗೂ ಪ್ರಸ್ತುತ ದಿನಾಂಕ 01-07-2021 ರಿಂದಲೇ ಶೇ.27% (ಬೆಂಗಳೂರು ನಗರ) ಮನೆ ಬಾಡಿಗೆ ಭತ್ಯೆ ಪರಿಷ್ಕರಿಸಲು ಹಾಗೂ ಇತರ ರಾಜ್ಯ ನಗರ ಪ್ರದೇಶಳಿಗೂ ಪರಿಷ್ಕರಿಸಿ ನೀಡಬೇಕು.
ಕೇಂದ್ರ ಸರ್ಕಾರದ ಮಾದರಿಯಂತೆ Child Care Leave (ಮಕ್ಕಳ ಹಾರೈಕೆ ರಜೆಯನ್ನು ರಾಜ್ಯ ಸರ್ಕಾರದ ಮಹಿಳಾ ನೌಕರರಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಆರೈಕೆಗಾಗಿ 730 ದಿನಗಳ ರಜೆಯನ್ನು ಹೆಚ್ಚಿಸುವುದು.
ಕೇಂದ್ರ ಸರ್ಕಾರದ ಮಾದರಿಯಂತೆ, ರಾಜ್ಯ ಸರ್ಕಾರಿ ನೌಕರರಿಗೂ ನಿವೃತ್ತಿಯ ದಿನ ಅವರ ಹಕ್ಕಿನಲ್ಲಿರುವ (ಗಳಿಕೆ ರಜೆ ಹಾಗೂ ಅರ್ಧ ವೇತನ ರಜೆ) ಎರಡನ್ನೂ ಪರಿಗಣನೆಗೆ ತೆಗೆದುಕೊಂಡು, ಗರಿಷ್ಠ 300 ದಿನಗಳ ನಗದೀಕರಣ ಸೌಲಭ್ಯ ನೀಡುವುದು. ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೂ ಮೂಲ ವೇತನದ ಶೇಕಡವಾರು ದರದಲ್ಲಿ ನಗರ ಪರಿಹಾರ ಭತ್ಯೆಯನ್ನು ನೀಡುವುದು ಎಂದು ಮನವಿ ಮಾಡಲಾಗಿದೆ.
0 Response to 7th pay commission; ಮನೆ ಬಾಡಿಗೆ ಮತ್ತು ಇತರ ಭತ್ಯೆ ಏರಿಕೆ ಬೇಡಿಕೆ
Post a Comment